ನಮಸ್ತೆ ವೀಕ್ಷಕರೇ ನನ್ನ ಹೆಸರು ಡಾಕ್ಟರ್ ಅಪೂರ್ವ ಮುಕುಂದ್ ಪ್ರಾಣ ಪ್ರಕೃತಿ ಚಿಕಿತ್ಸೆ ಹಾಗೂ ಯೋಗ ಕೇಂದ್ರ ಕಲ್ಬುರ್ಗಿಯಿಂದ ಇವತ್ತಿನ ವಿಡಿಯೋದಲ್ಲಿ ನಾವು ಡಯಾಬಿಟಿಸ್ ಸುತ್ತಲೂ ಏನು ತಪ್ಪು ಕಲ್ಪನೆಗಳಿದೆ ಅದನ್ನ ತಿಳ್ಕೊಳೋಣ ಸಾಧಾರಣವಾಗಿ ನೀವೆಲ್ಲ ಕೇಳಿರ್ತೀರಾ ತುಂಬಾ ಜನ Suggestion ಹೇಳ್ತಾ ಇರ್ತಾರೆ ಡಯಾಬಿಟಿಸ್ ಬಗ್ಗೆ ಅನ್ನ ತಿನ್ನಬೇಡಿ ಬರಿ ಚಪಾತಿನೇ ತಿನ್ನಿ ಅಂತ ಅಥವಾ ಹೇಳ್ತಾರೆ ಚಪಾತಿ ಅನ್ನ ಬಿಟ್ಟು ಬಿಟ್ಬಿಡಿ ಬರಿ ಸಿರಿಧಾನ್ಯ ತಿನ್ನಿ ಅಂತ ಕೆಲವರು ಹೇಳ್ತಾರೆ ಕೆಲವರು ಹೇಳ್ತಾರೆ ಹಣ್ಣುಗಳನ್ನು ನಾವು ತಿನ್ನಲೇಬಾರದು ಅಂತ ಹೇಳ್ತಾರೆ ಈ ರೀತಿ ತುಂಬಾ ತಪ್ಪು ಕಲ್ಪನೆಗಳು ನಾವು ಡಯಾಬಿಟಿಸ್ ಬಗ್ಗೆ ಅಲ್ಲಿ ಇಲ್ಲಿಂದ ಕೇಳಿರ್ತೀವಿ ಸೊ ಅದರ ಬಗ್ಗೆ ಒಂದೊಂದಾಗಿ ಕ್ಲಿಯರಾಗಿ ತಿಳ್ಕೊಳೋಣ.
1.ಮೊದಲನೇ ತಪ್ಪು ಕಲ್ಪನೆ: ಅನ್ನ ತಿನ್ನಲೇಬಾರದು, ಚಪಾತಿ ಮಾತ್ರ ತಿನ್ನಬೇಕು
ಮೊದಲನೇದು ಏನು ಅಂತ ಹೇಳಿದ್ರೆ ನಾವು ರೈಸ್ ತಿನ್ಲೇಬಾರದು ಅದು ಬಿಟ್ಟು ಚಪಾತಿ ತಿನ್ನಬೇಕು ಅನ್ನುವಂತದ್ದು ಹಾಗೆ ರೈಸ್ ಮತ್ತೆ ಚಪಾತಿ ಎರಡು Almost ಸೇಮ್ ಕ್ಯಾಲೋರಿಸ್ ಆಗಿರುತ್ತೆ ಹಾಗಾಗಿ ರೈಸ್ ಮತ್ತೆ ಚಪಾತಿಯಲ್ಲಿ ಜಾಸ್ತಿ ಅಂತರ ಏನು ಇರಲ್ಲ ಆದ್ರೆ ಏನು ನಮಗೆ ಡಿಫರೆನ್ಸ್ ಏನಾಗೋದು ಅಂತ ಹೇಳಿದ್ರೆ ನಾವು ಅದರೊಟ್ಟಿಗೆ ತಿನ್ನುವಂತಹ ಪಲ್ಯ ಆಗಿರಬಹುದು ತರಕಾರಿಗಳಾಗಿರಬಹುದು ಯಾಕಂತ ಹೇಳಿದ್ರೆ ರೈಸ್ ತಿಂದಾಗ ಬರಿ ಒಂದು ತಿಳಿ ಸಾರು ಹಾಕೊಂಡು ತಿಂದಿರ್ತೀವಿ ಅದರ ಜೊತೆ ತರಕಾರಿ ತಿನ್ನೋದು ಕಮ್ಮಿ ಬೇಳೆ ತಿನ್ನೋದು ಕಮ್ಮಿ ಆದ್ರೆ ಚಪಾತಿಯಲ್ಲಿ ಏನಾಗುತ್ತೆ ಅದರ ಜೊತೆಗೆ ಪಲ್ಯ ತಿಂತೀವಿ ಒಂದು ಬೇಳೆ ಅಥವಾ ಕಾಳು ಪಲ್ಯಗಳು ತಿಂತೀವಿ.

ಅದಲ್ಲದೆ ನಮಗೆ ರೈಸ್ ಅಲ್ಲಿ ಕ್ವಾಂಟಿಟಿ ಮೆಜರ್ ಮಾಡೋಕೆ ಗೊತ್ತಾಗೋದಿಲ್ಲ ನಾವು ತುಂಬಾ ಜಾಸ್ತಿ ತಿಂದು ಬಿಡ್ತೀವಿ ಆದ್ರೆ ಚಪಾತಿ ಆಗಲ್ಲ ನಾವು ಒಂದು ಎರಡು ಇತರ ಕೌಂಟ್ ಮಾಡಿ ತಿಂತೀವಿ ಅದರಿಂದಾನೆ ನಮಗೆ ಮೇಜರ್ ವ್ಯತ್ಯಾಸ ಆಗೋದು ಅದಕ್ಕಾಗಿ ನೀವು ರೈಸ್ ನ ಬಿಟ್ಬಿಟ್ಟು ಚಪಾತಿ ತಿನ್ನೋ ಅವಶ್ಯಕತೆ ಖಂಡಿತವಾಗ್ಲೂ ಇಲ್ಲ ಅದಕ್ಕಾಗಿ ನೀವು ರೈಸ್ ನ ಕಂಟಿನ್ಯೂ ಮಾಡಿ ಆದ್ರೆ ರೈಸ್ ನ ಹೇಗೆ ತಿನ್ನಬೇಕು ಅಂತ ತಿಳ್ಕೊಳೋದು ತುಂಬಾ ಮುಖ್ಯ ಅದಕ್ಕೆ ರೈಸ್ ತಿನ್ನುವಾಗ ಮೇಜರ್ ಆಗಿ ನಾವು ನೆನಪಿಟ್ಟುಕೊಳ್ಳಬೇಕು ಏನು ಅಂತ ಹೇಳಿದ್ರೆ .
ಈ ರೈಸ್ ಒಂದು ಕಾರ್ಬೋಹೈಡ್ರೇಟ್ ಸೋರ್ಸ್ ಅಂದ್ರೆ ಶುಗರ್ಸ್ ಜಾಸ್ತಿ ಇರುತ್ತೆ ಇದರಲ್ಲಿ ಅದನ್ನ ಬ್ಯಾಲೆನ್ಸ್ ಮಾಡೋದಕ್ಕೆ ನೀವು ಅದಕ್ಕೆ ಒಂದು ಚಮಚ ತುಪ್ಪ ಹಾಕಬಹುದು ಒಂದಿಷ್ಟು ಪಲ್ಯ ಮತ್ತು ಸೊಪ್ಪು ತರಕಾರಿಗಳು ಒಂದಿಷ್ಟು ಬೇಳೆ ಅಥವಾ ಕಾಳು ಪಲ್ಯ ಈ ರೀತಿ ಕಾಂಬಿನೇಷನ್ ಅಲ್ಲಿ ತಿಂದಾಗ ರೈಸ್ ನಿಮಗೆ ಯಾವುದೇ ತರದ ಹಾನಿ ಉಂಟುಮಾಡಲ್ಲ.
Watch Full Video : ಡಯಾಬಿಟಿಸ್ ಆಹಾರ ಕ್ರಮ DIABETES DIET CHART | Dr Apoorva Mukund | Arogya Bhagya Kannada
2. ಎರಡನೇ ತಪ್ಪು ಕಲ್ಪನೆ: ಗೋಧಿ ಅಥವಾ ಚಪಾತಿಯಲ್ಲಿರುವ ಗ್ಲೂಟನ್ ಹಾನಿಕಾರಕವೇ?
ಮತ್ತು ನೆಕ್ಸ್ಟ್ ಏನು ಡೌಟ್ ಅಂತ ಹೇಳಿದ್ರೆ ಇನ್ನೊಂದು ಗೋಧಿ ತಿನ್ನಲೇಬಾರದ ನಾವು ಗೋಧಿಯಲ್ಲಿ ಗ್ಲೂಟನ್ ಅನ್ನೋದು ಇರುತ್ತೆ ಗೋಧಿ ತುಂಬಾ ಹಾನಿಕಾರಕ ಅಂತ ಕೆಲವೊಂದು ವಾಟ್ಸಪ್ ವಿಡಿಯೋಸ್ ಫಾರ್ವರ್ಡ್ಸ್ ತುಂಬಾ ಜಾಸ್ತಿ ಆಗಿತ್ತು ಒಂದು ಸಮಯದಲ್ಲಿ ಅವಾಗ ಜನಕ್ಕೆ ಇಷ್ಟು ದಿನ ಹೇಳಿದ್ರು ಅನ್ನ ತಿನ್ನಬಾರದು ಚಪಾತಿ ತಿನ್ನಬೇಕು ಅಂತ ಈಗ ಹೇಳ್ತಾರೆ ಚಪಾತಿಯಲ್ಲಿ ಗ್ಲೂಟನ್ ಇರುತ್ತೆ ಗೋಧಿ ತಿನ್ಲೇಬಾರದು ಅಂತ ಏನ್ ಮಾಡಬೇಕು ಅಂತ ಡೌಟ್ ತುಂಬಾ ಜನಕ್ಕೆ ಇತ್ತು.
ಹಾಗಾಗಿ ಚಪಾತಿಯಲ್ಲಿ ಹೌದು ಗ್ಲೂಟನ್ ಅನ್ನೋದು ಇರುತ್ತೆ ಗೋಧಿಯಲ್ಲಿ ಅದು ಯಾರಿಗೆ ತೊಂದರೆ ಮಾಡುತ್ತೆ ಅಂದ್ರೆ ಯಾರಿಗೆ ಗ್ಲೂಟನ್ ಅಲರ್ಜಿ ಇರುತ್ತೆ ಅಥವಾ ಸೆನ್ಸಿಟಿವಿಟಿ ಇರುತ್ತೆ ಅಂತವರಿಗೆ ತೊಂದರೆಯನ್ನು ಮಾಡುತ್ತೆ ಈ ಫಾರಿನ್ ಅಲ್ಲಿ ಅಂದ್ರೆ ಅಮೆರಿಕಾ ಕಡೆಗೆ ಜಾಸ್ತಿ ಜನಕ್ಕೆ ಗ್ಲೂಟನ್ ಅಲರ್ಜಿ ಇರುತ್ತೆ ಹಾಗಾಗಿ ಅವರು ಗೋಧಿಯನ್ನ ಕಡಿಮೆ ಬಳಸುತ್ತಾರೆ ಆಮೇಲೆ ಗ್ಲೂಟೆನ್ ಫ್ರೀ ಅಂತ ತುಂಬಾ ಆಪ್ಷನ್ಸ್ ಸಿಗುತ್ತೆ ಅದೇ ನಾವು ಕಲ್ಚರ್ ನ ನಮ್ಮ ಇಂಡಿಯಾಗೆ ತಗೊಂಡು ಬಂದು ಅದರ ಮೇಲೆ ಇರುವ ಎಲ್ಲಾ ಭಯ ಎಲ್ಲರಿಗೂ ಪಡಿಸ್ತಾ ಇರ್ತೀವಿ.

ಸೋ ಅದಕ್ಕೆ ಚಪಾತಿ ತಿಂದ್ರೆ ಯಾವುದೇ ತರದ ತೊಂದರೆ ಆಗೋದಿಲ್ಲ ನೀವು ಖಂಡಿತವಾಗ್ಲೂ ತಿನ್ನಬಹುದು ಆದರೆ ಯಾರಿಗೆ ಹೊಟ್ಟೆ ತೊಂದರೆಗಳಿದೆ ಅಂದ್ರೆ ಐ ಬಿಎಸ್ ಇರುತ್ತೆ ಕೆಲವರಿಗೆ ಕೆಲವರಿಗೆ ಜಾಸ್ತಿ ಅಸಿಡಿಟಿ ಕಾನ್ಸ್ಟಿಪೇಶನ್ ಆಮೇಲೆ ಚಪಾತಿ ತಿಂದ್ರೆ ಹೊಟ್ಟೆ ನೋವು ಬರೋದು ಈ ರೀತಿ ಏನಾದರೂ ಸಮಸ್ಯೆಗಳು ಆಗ್ತಿದ್ರೆ ಮಾತ್ರ ಚಪಾತಿಯನ್ನು ನೀವು ಕಂಪ್ಲೀಟ್ ಆಗಿ ಬಿಡಬೇಕು ಅಥವಾ ಚಪಾತಿ ಕೂಡ ಖಂಡಿತವಾಗ್ಲೂ ತಿನ್ನಬಹುದು.
ಆದ್ರೆ ನೀವು ಅನ್ನ ಬಿಟ್ಟು ಚಪಾತಿ ತಿನ್ನೋದು ಅಥವಾ ಚಪಾತಿ ಬಿಟ್ಟು ಅನ್ನನೆ ತಿನ್ನಬೇಕು ಈ ರೀತಿಯನ್ನು ಏನು ಮಾಡೋ ಅವಶ್ಯಕತೆ ಇರೋದಿಲ್ಲ ಸೋ ನೀವು ಕಂಟಿನ್ಯೂ ಮಾಡಬಹುದು ಆದ್ರೆ ಚಪಾತಿ ಕೂಡ ನಾನು ಹೇಳಿದಂಗೆ ಸೇಮ್ ಕ್ಯಾಲೋರಿಸ್ ಇರುತ್ತೆ ಅನ್ನ ಅಷ್ಟೇನೆ ಸೋ ಅದರ ಜೊತೆಗೂ ನಾವು ಪಲ್ಯಗಳು ಹಾಗೂ ತರಕಾರಿ ಆಮೇಲೆ ಈ ಕಾಳು ಪಲ್ಯ ಈ ಪ್ರೋಟೀನ್ ಸೋರ್ಸ್ ಈ ರೀತಿ ಎಲ್ಲದನ್ನು ಸೇರಿಸಿಬಿಟ್ಟು ತಿಂದ್ರೆ ಯಾವುದೇ ರೀತಿ ಹಾನಿ ಉಂಟುಮಾಡಲ್ಲ.
3.ಮೂರನೇ ತಪ್ಪು ಕಲ್ಪನೆ: ಅನ್ನ, ಚಪಾತಿ ಬಿಟ್ಟು ಬರಿ ಸಿರಿಧಾನ್ಯ (ಮಿಲೆಟ್ಸ್) ತಿನ್ನಬೇಕಾ?
ಈಗ ನೆಕ್ಸ್ಟ್ ಇನ್ನೊಂದು ಏನು ಅಂತ ಹೇಳಿದ್ರೆ ಇವೆರಡು ಬಿಟ್ಟು ಬರಿ ಸಿರಿಧಾನ್ಯ ತಿನ್ನಬೇಕಾ ಮಿಲೆಟ್ಸ್ ತಿನ್ಬೇಕಾ ರಾಗಿ ತಿನ್ನಬೇಕಾ ಇದೊಂದು ಡೌಟ್ ತುಂಬಾ ಜನ ಏನು ಮಾಡಿದ್ದಾರೆ ನಮ್ಮ ನಾರ್ಮಲ್ ಆಗಿ ನಾವು ತಿನ್ನೋ ಊಟನ ಫುಲ್ ಬಿಟ್ಬಿಟ್ಟು ಓಟ್ಸ್ ತಿನ್ನೋದು ಶುರು ಮಾಡಿಬಿಟ್ಟಿದ್ದಾರೆ ಬೆಳಿಗ್ಗೆ ಮಧ್ಯಾಹ್ನ ಬರೀ ರಾಗಿ ತಿಂತಾರೆ
ಆದರೆ ನೀವು ಅರ್ಥ ಮಾಡಿಕೊಳ್ಳಬೇಕಾಗಿರೋದು ಏನು ಅಂತ ಹೇಳಿದ್ರೆ ನಮ್ಮ ಧಾನ್ಯಗಳು ಅಕ್ಕಿ ಗೋಧಿ ಆಗಿರಬಹುದು ಅಥವಾ ಸಿರಿಧಾನ್ಯ ಅಂದ್ರೆ ನಮ್ಮ ಮಿಲೆಟ್ಸ್ ಆಗಿರಬಹುದು ರಾಗಿ ಆಗಿರಬಹುದು ನಿಮ್ಮ ಸಾಮೆ ಅಕ್ಕಿ ನವಣೆ ಇದೆಲ್ಲ ಕೂಡ ಕಾರ್ಬೋಹೈಡ್ರೇಟ್ ಹೈಡ್ರೇಟ್ ಸೋರ್ಸ್ ಆಗಿರುತ್ತೆ ಅದಕ್ಕಾಗಿ ಇದರಲ್ಲೂ ಕೂಡ ಅಷ್ಟೇ ಶುಗರ್ ಇರುತ್ತೆ ಏನಂದ್ರೆ ಇದರಲ್ಲಿ ಒಂದು ಚೂರು ನಾರಿನ ಅಂಶ ಜಾಸ್ತಿ ಇರುತ್ತೆ ಹಾಗಾಗಿ ಆ ರೈಸ್ ಮತ್ತೆ ಗೋಧಿಕಿನ್ನ ಸ್ವಲ್ಪ ಶುಗರ್ ಕಂಟ್ರೋಲ್ ಅಲ್ಲಿ ಇರುತ್ತೆ ಅಷ್ಟೇ.
ಆದ್ರೆ ನಾವು ಅನ್ನ ಮತ್ತೆ ಗೋಧಿ ಬಿಟ್ಬಿಟ್ಟು ಕಂಪ್ಲೀಟ್ ಆಗಿ ಮಿಲೆಟ್ಸ್ ತಿನ್ನೋ ಅವಶ್ಯಕತೆ ಕೂಡ ನಮಗೆ ಇಲ್ಲ ಅದಕ್ಕಾಗಿ ನೀವು ರೆಗ್ಯುಲರ್ ಆಗಿ ಹೇಗೆ ತಿಂತಿದಿರೋ ಅದೇ ರೀತಿ ತಿನ್ನಿ ಆದ್ರೆ ನಿಮ್ಮ ತರಕಾರಿ ತಿನ್ನೋದು ಜಾಸ್ತಿ ಮಾಡಿ ಪ್ರೋಟೀನ್ ಕಂಟೆಂಟ್ ತಿನ್ನೋದು ಜಾಸ್ತಿ ಮಾಡಿ ಮತ್ತೆ ಹೆಲ್ದಿ ಫ್ಯಾಟ್ಸ್ ಅಂದ್ರೆ ಈ ತುಪ್ಪ ಆಗಿರಬಹುದು ನಟ್ಸ್ ಆಗಿರಬಹುದು ಇದನ್ನ ಸೇರಿಸಿ ತಿನ್ನೋ ನೀವು ಚೇಂಜಸ್ ನ ಮಾಡ್ಕೊಳಿ.

ಆದ್ರೆ ಮಿಲೆಟ್ಸ್ ಏನು ಅಂತ ಹೇಳಿದ್ರೆ ದಿನಕ್ಕೆ ಒಂದು ಬಾರಿಗಿನ ಜಾಸ್ತಿ ತಿನ್ನೋ ಅವಶ್ಯಕತೆ ಇಲ್ಲ ಯಾವುದಾದರೂ ಒಂದು ಹೊತ್ತಲ್ಲಿ ಮಾತ್ರ ಮಿಲೆಟ್ಸ್ ನ ತಿನ್ನಬಹುದು ಅಥವಾ ವಾರಕ್ಕೆ ಒಂದು ಎರಡು ಮೂರು ಸಲ ನೀವು ಮಿಲೆಟ್ಸ್ ನ ಬಳಸಬಹುದು ಮತ್ತೆ ತುಂಬಾ ಜನ ಹೇಳ್ತಾರೆ ಬೆಳಗ್ಗೆ ಎದ್ದುಬಿಟ್ಟು ನಾನು ರಾಗಿ ಗಂಜಿ ಕುಡಿತೀನಿ ಅಂತ ಯಾಕೆ ಶುಗರ್ ಕಡಿಮೆ ಆಗುತ್ತೆ ಅಂತ ಬಟ್ ಅದಾದ್ಮೇಲೆ ಮತ್ತೆ ಪುನಃ ಬ್ರೇಕ್ಫಾಸ್ಟ್ ಕೂಡ ಮಾಡ್ತಾರೆ ಹೀಗೆ ಮಾಡಿ ಮಾಡಿದಾಗ ಶುಗರ್ ತುಂಬಾ ಜಾಸ್ತಿ ಆಗುತ್ತೆ ಯಾಕಂತ ಹೇಳಿದ್ರೆ ರಾಗಿಯಲ್ಲಿ ಕೂಡ ಅಷ್ಟೇ ಶುಗರ್ ಇರುತ್ತೆ ನೀವು ಅನ್ನ ಗೋಧಿ ತಗೊಂಡಷ್ಟು ರಾಗಿ ತಗೊಂಡ್ರೆ ಅದರಲ್ಲೂ ಶುಗರ್ ಹೆಚ್ಚಾಗುತ್ತೆ ಸೋ ಈ ರೀತಿ ಯಾವುದನ್ನು ಮಾಡದೆ ಇದ್ರೆ ಕರೆಕ್ಟಾಗಿ ನಾರ್ಮಲ್ ಆಗಿ ಊಟ ಮಾಡಿದ್ರೆ ನಿಮಗೆ ಒಳ್ಳೆಯದು.
4.ನಾಲ್ಕನೇ ತಪ್ಪು ಕಲ್ಪನೆ: ಡಯಾಬಿಟಿಸ್ ಇರುವವರು ಹಣ್ಣುಗಳನ್ನು ತಿನ್ನಲೇಬಾರದಾ?
ಇನ್ನೊಂದು ಲಾಸ್ಟ್ ಒನ್ ಏನಂತ ಹೇಳಿದ್ರೆ ತುಂಬಾ ಕಾಮನ್ ಆಗಿ ಜನ ಅನ್ಕೊಂಡಿರೋದು ಏನು ಅಂತ ಹೇಳಿದ್ರೆ ಡಯಾಬಿಟಿಸ್ ಇರೋರು ಫ್ರೂಟ್ಸ್ ನ ತಿನ್ನಲೇಬಾರದು ಅಂತ ಹಾಗೆ ಖಂಡಿತವಾಗ್ಲೂ ಇಲ್ಲ ಯಾಕಂದ್ರೆ ಸ್ಟಡೀಸ್ ಹೇಳಿದೆ ರಿಸರ್ಚ್ ಮಾಡಿ ಇದರ ಮೇಲೆ ಏನಂತ ಹೇಳಿದ್ರೆ ಯಾರು ರೆಗ್ಯುಲರ್ ಆಗಿ ಫ್ರೂಟ್ಸ್ ತಿಂತಾ ಇರ್ತಾರೋ ಅವರಿಗೆ ಡಯಾಬಿಟಿಸ್ ಬರುವ ಸಾಧ್ಯತೆ ಕಡಿಮೆ ಇದೆ ಅಂತ ರಿಸರ್ಚ್ ಹೇಳುತ್ತೆ ಅದಕ್ಕಾಗಿ ರೆಗ್ಯುಲರ್ ಆಗಿ ಫ್ರೂಟ್ಸ್ ತಿನ್ನೋದು ತುಂಬಾ ಮುಖ್ಯ ಆಮೇಲೆ ಡಯಾಬಿಟಿಸ್ ಬಂದವರು ಕೂಡನು ಫ್ರೂಟ್ಸ್ ನ ಖಂಡಿತವಾಗ್ಲೂ ತಿನ್ನಬಹುದು.
ಈಗ ಕಾಮನ್ ಆಗಿ ಶುಗರ್ ಜಾಸ್ತಿ ಇರುವ ಫ್ರೂಟ್ಸ್ ಯಾವುದೆಲ್ಲ ಅಂತ ಹೇಳಿದ್ರೆ ನಮ್ಮ ಬಾಳೆಹಣ್ಣು ಮಾವಿನಹಣ್ಣು ಚಿಕ್ಕು ಆಗಿರಬಹುದು ಸೀತಾಫಲ್ ಜಾಕ್ ಫ್ರೂಟ್ ಇತರ ಹಣ್ಣುಗಳಲ್ಲಿ ಸ್ವಲ್ಪ ಶುಗರ್ ಕಂಟೆಂಟ್ ಜಾಸ್ತಿ ಇರುತ್ತೆ ಆದರೆ ಬೇರೆ ಹಣ್ಣುಗಳಲ್ಲಿ ಆಪಲ್ ಆಗಿರಬಹುದು ಆರೆಂಜ್ ಗ್ರೇಪ್ಸ್ ಮೋಸಂಬಿ ಪಪ್ಪಾಯ ಇದನ್ನೆಲ್ಲ ರೆಗ್ಯುಲರ್ ಆಗಿ ನೀವೆಲ್ಲ ತಿಂತಾ ಇರಬಹುದು.

ಈ ಬೇರೆ ಶುಗರ್ ಜಾಸ್ತಿ ಇದೆ ಅಂತ ಹೇಳಿದ್ನಲ್ಲ ಆ ಹಣ್ಣುಗಳು ಕೂಡ ನೀವು ಖಂಡಿತವಾಗ್ಲೂ ತಿನ್ನಬಹುದು ಆದ್ರೆ ಈ ಹಣ್ಣುಗಳು ತಿನ್ನಬೇಕಾದರೆ ನೀವು ಯೋಚನೆ ಮಾಡಬೇಕಾಗಿರೋದು ಜಾಸ್ತಿ ತಿನ್ನಬಾರದು ಒಂದು ಪ್ರೊಪೋರ್ಷನ್ ಅಲ್ಲಿ ತಿನ್ನಬೇಕು ಒಂದೇ ದಿನದಲ್ಲಿ ಎರಡೆರಡು ಮಾವಿನಹಣ್ಣು ತಿನ್ರಿ ಅಥವಾ ಊಟ ಆಲ್ರೆಡಿ ಹೊಟ್ಟೆ ತುಂಬಾ ಅನ್ನ ಎಲ್ಲ ತಿಂದ್ಬಿಟ್ಟು ಅದಾದ್ಮೇಲೆ ಒಂದು ಹಣ್ಣು ತಿಂದ್ರಿ ಅಂದ್ರೆ ಖಂಡಿತ ನಿಮಗೆ ಶುಗರ್ ಜಾಸ್ತಿ ಆಗುತ್ತೆ.
ನೀವು ಯಾವುದೇ ಹಣ್ಣು ತಗೊಳ್ಳಿ ಒಂದು ಮಾವಿನಹಣ್ಣು ಆಗಿರಬಹುದು ಬಾಳೆಹಣ್ಣು ಆಗಿರಬಹುದು ಅದರಲ್ಲಿ ಇರುವ ಶುಗರ್ 20% ಮಾತ್ರ ಆದ್ರೆ ಅದೇ ಒಂದು ಬೌಲ್ ಅನ್ನ ತಗೊಳ್ಳಿ ಅನ್ನದಲ್ಲಿ 75% ಆಫ್ ಕಾರ್ಬೋಹೈಡ್ರೇಟ್ ಇರುತ್ತೆ 75% ಅಷ್ಟು ಶುಗರ್ ಇರುತ್ತೆ ನಿಮ್ಮ ಅನ್ನ ಆಗಿರಬಹುದು ಗೋಧಿ ರಾಗಿ ಎಲ್ಲದರಲ್ಲೂ 70% ಗಿಂತ ಜಾಸ್ತಿ ಶುಗರ್ ಇರುತ್ತೆ ಅದಕ್ಕೆ ಕಂಪೇರ್ ಮಾಡಿದ್ರೆ ಹಣ್ಣುಗಳಲ್ಲಿ ಕೇವಲ 20 ಅಥವಾ 25% ಶುಗರ್ ಇರುತ್ತೆ ಅದಕ್ಕೆ ನಾನು ಹೇಳೋದು ಏನು ಅಂತ ಹೇಳಿದ್ರೆ ನಿಮ್ಮ ಅನ್ನ ಗೋಧಿ ಮತ್ತೆ ಈ ರಾಗಿ ಮಿಲೆಟ್ಸ್ ನ ತಿನ್ನೋದು ಸ್ವಲ್ಪ ಕಡಿಮೆ ಮಾಡಿ ಹಣ್ಣುಗಳನ್ನು ಖಂಡಿತವಾಗ್ಲೂ ನಿಮ್ಮ ಡಯಟ್ ಅಲ್ಲಿ ಸೇರಿಸಿಕೊಳ್ಳಿ.
ಮತ್ತೆ ಹಣ್ಣು ತಿನ್ನಬೇಕಾದರೆ ಒಂದು ಯೋಚನೆ ಮಾಡಬೇಕು ಅದನ್ನ ಜ್ಯೂಸ್ ಮಾಡಿ ಕುಡಿಬೇಡಿ ಜ್ಯೂಸ್ ಮಾಡಿ ಕುಡಿದಾಗ ಅದರ ಫೈಬರ್ ಕಂಪ್ಲೀಟ್ ಆಗಿ ನೀವು ತೆಗೆದು ಬಿಡ್ತೀರಾ ಅದರಿಂದ ಬರಿ ಶುಗರ್ ವಾಟರ್ ಕುಡಿಯೋ ತರ ಅದು ಅದು ಕುಡಿದಾಗ ಏನಾಗುತ್ತೆ ಬ್ಲಡ್ ಶುಗರ್ ಸಡನ್ ಆಗಿ ರೈಸ್ ಆಗುತ್ತೆ ಅದಕ್ಕೆ ಹಣ್ಣುಗಳು ಯಾವಾಗ್ಲೂ ತಿನ್ನಬೇಕು ಆಮೇಲೆ ಹಣ್ಣು ತಿನ್ನಬೇಕು ಬೇಕಾದ್ರೆ ಡಯಾಬಿಟಿಸ್ ಅವರು ಒಂದು ಪ್ರೋಟೀನ್ ಅಥವಾ ಫ್ಯಾಟ್ ನ ಸೇರಿಸಿ ತಿಂದ್ರೆ ಇನ್ನು ಒಳ್ಳೆಯದಾಗಿ ನೀವು ಶುಗರ್ ಕಂಟ್ರೋಲ್ ಮಾಡಬಹುದು ಹೇಗೆ ಅಂತ ಹೇಳಿದ್ರೆ ಒಂದು ಬಾಳೆಹಣ್ಣು ತಿಂತಿದ್ರೆ ಅದರ ಜೊತೆ ಒಂದು ಸ್ವಲ್ಪ ನಟ್ಸ್ ತಿನ್ನಿ ನಟ್ಸ್ ಅಂದ್ರೆ ಈ ಬಾದಾಮಿ ಗೋಡಂಬಿ ಅಕ್ರೋಟ್ ಈ ರೀತಿ ನಟ್ಸ್ ಗಳನ್ನ ಸೇರಿಸಿ ಹಣ್ಣು ತಿಂದಾಗ ನಿಮಗೆ ಯಾವುದೇ ರೀತಿ ತೊಂದರೆಗಳು ಆಗೋದಿಲ್ಲ.
Summary
ಸೋ ಇವತ್ತಿನ ವಿಡಿಯೋದಲ್ಲಿ ನಾವು ಏನೆಲ್ಲಾ ತಪ್ಪು ಕಲ್ಪನೆಗಳಿದೆ ಡಯಾಬಿಟಿಸ್ ಸುತ್ತಲೂ ಅಂತ ತಿಳ್ಕೊಂಡ್ವಿ ನಿಮಗೆ ಇನ್ನು ಏನಾದರೂ ತಪ್ಪು ಕಲ್ಪನೆಗಳು ಗೊತ್ತಿದ್ರೆ ಕಮೆಂಟ್ಸ್ ಅಲ್ಲಿ ನಮಗೆ ತಿಳಿಸಿ ಆಮೇಲೆ ಖಂಡಿತ ಈ ವಿಡಿಯೋನ ನಿಮ್ಮ ಬಂಧುಗಳಿಗೆ ಶೇರ್ ಮಾಡಿ ಯಾಕಂದ್ರೆ ತುಂಬಾ ಜನಕ್ಕೆ ಈ ತಪ್ಪು ಕಲ್ಪನೆಗಳು ಇರುತ್ತೆ ಆಮೇಲೆ ನಿಮಗೆ ಏನಾದರೂ ಪರ್ಸನಲ್ ಆಗಿ ಕನ್ಸಲ್ಟೇಶನ್ ಬೇಕು ಇನ್ನು ಮಾಹಿತಿ ಹೆಚ್ಚಾಗಿ ಬೇಕು ಅಂತ ಹೇಳಿದ್ರೆ ಈ ವಿಡಿಯೋ ಕೆಳಗಡೆ ನಿಮಗೆ ನಂಬರ್ ಮತ್ತೆ ವಿಳಾಸ ಸಿಗುತ್ತೆ ಅದರಿಂದ ನಮಗೆ ಕಾಂಟ್ಯಾಕ್ಟ್ ಮಾಡಿ ಮುಂದಿನ Article ಲ್ಲಿ ಭೇಟಿಯಾಗೋಣ ಅದರಲ್ಲಿ ನಾನು ನಿಮಗೆ ಡಯಾಬಿಟಿಸ್ ಗೆ ಯಾವ ರೀತಿ ಆಹಾರ ಕ್ರಮವನ್ನು ಪಾಲಿಸಬೇಕು ಅಂತ ಹೇಳ್ತೀನಿ ನಮಸ್ತೆ.
Comments (0)
No comments yet. Be the first to comment!